ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ನಾಡೋಜ ಡಾ. ಸಾರಾ ಅಬೂಬಕರ್ ಕಿರು ಪರಿಚಯ


ಹೆಸರು : ಸಾರಾ ಅಬೂಬಕರ್

ಹುಟ್ಟಿದ ಊರು : ಕಾಸರಗೋಡು, ಕೇರಳ ರಾಜ್ಯ

ತಂದೆಯ ಹೆಸರು : ಪಿ. ಅಹಮದ್

ತಾಯಿಯ ಹೆಸರು : ಜೈನಾಬಿ

ಹುಟ್ಟಿದ ದಿನಾಂಕ : 30-6-1936

ಪತಿಯ ಹೆಸರು : ದಿವಂಗತ ಎಂ. ಅಬೂಬಕರ್- ನಿವೃತ್ತ ಎಕ್ಸ್ಕ್ಯೂಟಿವ್ ಇಂಜಿನಿಯರ್, ಕರ್ನಾಟಕ ಸರಕಾರ

ಮಾತೃ ಭಾಷೆ : ಮಲಯಾಳ

ಮಕ್ಕಳು : ನಾಲ್ಕು ಜನ ಗಂಡು ಮಕ್ಕಳು

ಪ್ರಕಟಗೊಂಡ ಕೃತಿಗಳು : ಇಪ್ಪತ್ತೇಳು

ಕಾದಂಬರಿ : ಚಂದ್ರಗಿರಿ ತೀರದಲ್ಲಿ, 1984, ಕರ್ನಾಟಕ ಸಾಹಿತ್ಯ ಅಕಾಡಮಿಯ ಕಾದಂಬರಿ ಪ್ರಶಸ್ತಿ; ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಸಹನಾ, 1985, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ವಜ್ರಗಳು, 1988, ಕದನ ವಿರಾಮ, 1991, ಸುಳಿಯಲ್ಲಿ ಸಿಕ್ಕವರು, 1994, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ನಿರಂಜನ ಮತ್ತು ರತ್ನಮ್ಮ ಹೆಗಡೆ ಮಹಿಳಾ ಸಾಹಿತ್ಯ ಪ್ರಶಸ್ತಿಗಳು, ತಳ ಒಡೆದ ದೋಣಿಯಲಿ, 1997, ಕೇಂದ್ರ ಸರಕಾರದ ಭಾಷಾ ಭಾರತಿ ಸನ್ಮಾನ, 2001, ಶಿವಾನಂದ ಪಾಟೀಲ ಪ್ರಶಸ್ತಿ - ಉತ್ತರ ಕರ್ನಾಟಕ, ಪ್ರವಾಹ - ಸುಳಿ, 1998, ಸಾವಿತ್ರಮ್ಮ ದೇ.ಜವರೇಗೌಡ ದತ್ತಿನಿಧಿ ಬಹುಮಾನ, ಪಂಜರ, 2004, ಇಳಿಜಾರು, 2011.

ಕಥಾ ಸಂಕಲನ : ಚಪ್ಪಲಿಗಳು, 1989, ಪಯಣ, 1992, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, 1996, ಖೆಡ್ಡಾ, 1999, ಸುಮಯ್ಯಾ (ಜಾನಪದ ಕತೆಗಳು), 2004, ಗಗನಸಖಿ, 2007.

ಭಾಷಾಂತರ ಕೃತಿಗಳು ಮಲಯಾಳದಿಂದ ಕನ್ನಡಕ್ಕೆ

ಮನೋಮಿ, 1992, ಕಮಲಾದಾಸ್, ಬಲೆ, 1998, ಬಿ.ಎಂ. ಸುಹರಾ, ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ನಾನಿನ್ನು ನಿದ್ರಿಸುವೆ, 2000, ಪಿ.ಕೆ. ಬಾಲಕೃಷ್ಣನ್, ತುರ್ತು ಪರಿಸ್ಥಿತಿಯ ಕರಾಳ ಮುಖ, 2007, ಪ್ರೊ. ಈಚರ ವಾರಿಯರ್, ಧರ್ಮದ ಹೆಸರಿನಲ್ಲಿ, 2009, ಆರ್. ಬಿ. ಶ್ರೀಕುಮಾರು ನಿವೃತ್ತ ಡಿ.ಜಿ.ಪಿ. (ಗುಜರಾತ್), ಮುಂಬೆಳಕು, 2011, ಡಾ. ಖದೀಜಾ ಮುಂತಾಸ್.

ಲೇಖನ ಸಂಗ್ರಹ
ಲೇಖನ ಗುಚ್ಛ, 1997, ಅನಾವರಣ 2002, ಸಾಹಿತ್ಯ, ಸಂಸ್ಕೃತಿ ಮತ್ತು ಮಹಿಳೆ, 2007, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಣೆ, ಚಿಂತೆ - ಚಿಂತನೆ, 2012.