ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಸದಸ್ಯತ್ವ


ಲೇಖಕಿಯರ ಸಂಘದ ಉದ್ದೇಶಗಳನ್ನು ಅಂಗೀಕರಿಸಿ ಅದರೊಡನೆ ಸಹಕರಿಸಲು ಬದ್ಧರಾಗುವ, 18 ವರ್ಷಕ್ಕೆ ಕಡಿಮೆ ಇಲ್ಲದ ಮಹಿಳೆಯರು ಕೆಳಗೆ ಕಾಣಿಸಿರುವಂತೆ ಯಾವ ವರ್ಗದ ಸದಸ್ಯತ್ವವನ್ನಾದರೂ ಪಡೆಯಬಹುದು.

ಸದಸ್ಯತ್ವದ ವರ್ಗ

 

ಸದಸ್ಯತ್ವದ ವಿವರಗಳು

ಸದಸ್ಯರಾಗ ಬಯಸುವವರು ಸದಸ್ಯತ್ವಕ್ಕಾಗಿ ಕೊಡತಕ್ಕ ಚಂದಾ ಹಣದೊಡನೆ ತಮ್ಮ ಅಪೇಕ್ಷಾ ಪತ್ರವನ್ನು ಸಲ್ಲಿಸತಕ್ಕದ್ದು. ಅಂಥವರನ್ನು ಆಯಾ ವರ್ಗದ ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಅಧ್ಯಕ್ಷರಿಗೆ ಅಧಿಕಾರವಿರತಕ್ಕದ್ದು ಮತ್ತು ಅದಕ್ಕೆ ಅಂದಿನ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆಯತಕ್ಕದ್ದು. ಯಾವ ಕಾರಣದಿಂದಲಾದರೂ ಅಪೇಕ್ಷಾ ಪತ್ರವನ್ನು ಒಪ್ಪಿಕೊಳ್ಳದಿದ್ದರೆ ಪಾವತಿ ಮಾಡಿದ ಮೊಬಲಗನ್ನು ಹಿಂದಿರುಗಿಸ ತಕ್ಕದ್ದು.

ಕನಿಷ್ಠ ಒಂದು ಕವಿತೆ/ಲೇಖನ/ಕಥೆ/ಪ್ರಬಂಧ/ಕಾದಂಬರಿ/ಸಾಹಿತ್ಯದ ಯಾವುದೇ ಪ್ರಕಾರದ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ/ಪುಸ್ತಕ ರೂಪದಲ್ಲಿ ಪ್ರಕಟಿಸಿರುವ ಲೇಖಕಿಯರು, ಕನ್ನಡ ಉಪನ್ಯಾಸಕಿಯರು/ಶಿಕ್ಷಕಿಯರು, ಕನ್ನಡ ಎಂ.ಎ ಪದವಿ ಪಡೆದವರು ಮಾತ್ರ ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ.