ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಪ್ರಶಸ್ತಿ ಪುರಸ್ಕಾರಗಳು

ಸಂಘದ ವಾರ್ಷಿಕ ಪುರಸ್ಕಾರಗಳು

ಸಂಘವು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಉತ್ತಮ ಕೃತಿಗಳನ್ನು ಗುರುತಿಸುವ ಹಾಗೂ ಪ್ರತಿಭಾವಂತ ಲೇಖಕಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಅನೇಕ ಸಾಹಿತ್ಯಾಸಕ್ತರು ಪ್ರಶಸ್ತಿ, ಪುರಸ್ಕಾರಗಳನ್ನು ಕೊಡಲು ಉದಾರವಾಗಿ ದೇಣಿಗೆ ನೀಡಿದ್ದಾರೆ. ದತ್ತಿನಿಧಿಗಳಿಂದ ಏರ್ಪಡಿಸುವ ಕಾರ್ಯಕ್ರಮಗಳು ಸಹ ಅನೇಕರಿಗೆ ಜ್ಞಾನಾರ್ಜನೆ. ಮನರಂಜನೆ, ತೃಪ್ತಿ ಹಾಗೂ ಸಂತಸಗಳನ್ನು ನೀಡುವುದರಲ್ಲಿ ಸಫಲವಾಗಿವೆ. ಸಂಘದ ಪ್ರಶಸ್ತಿ ಪುರಸ್ಕಾರಗಳು ಹಾಗೂ ಅವುಗಳನ್ನು ಪಡೆದವರ ವಿವರ ಇಲ್ಲಿದೆ:

 • ಅನುಪಮಾ ಪ್ರಶಸ್ತಿ
 • ಹೆಚ್.ವಿ.ಸಾವಿತ್ರಮ್ಮ ಪ್ರಶಸ್ತಿ
 • ಗೀತಾ ದೇಸಾಯಿ ದತ್ತಿನಿಧಿ ಬಹುಮಾನ
 • ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ
 • ಪ್ರೇಮಾ ಭಟ್ ದತ್ತಿನಿಧಿ ಬಹುಮಾನ
 • ಅಮೇರಿಕನ್ನಡ ದತ್ತಿನಿಧಿ ಬಹುಮಾನ
 • ದಿ.ಕೃಷ್ಣಗಿರಿ ಕೃಷ್ಣರಾಯರ ದತ್ತಿನಿಧಿ
 • ಆರ್.ಲಕ್ಷ್ಮೀದೇವಿ ದತ್ತಿನಿಧಿ
 • ದಿ.ಶಾಂತಾಬಾಯಿ ಸೇತೂರಾವ್ ದತ್ತಿನಿಧಿ
 • ಶ್ರೀ ಬ.ನ.ಸುಂದರರಾವ್ ದತ್ತಿನಿಧಿ
 • ಶ್ರೀಮತಿ ನುಗ್ಗೇಹಳ್ಳಿ ಪಂಕಜಾ ದತ್ತಿನಿಧಿ
 • ಶ್ರೀಮತಿ.ಎಸ್.ಗುಣಸಾಗರಿ ನಾಗರಾಜ್ ದತ್ತಿನಿಧಿ
 • ದಿ.ಕಾಕೋಳು ಸರೋಜಮ್ಮ ದತ್ತಿನಿಧಿ
 • ದಿ.ಶಾಂತಾದೇವಿ ಮಾಳವಾಡ ದತ್ತಿನಿಧಿ
 • ದಿ.ನಳಿನಿಮೂರ್ತಿ ದತ್ತಿನಿಧಿ
 • ಶ್ರೀಮತಿ ಅನ್ನಪೂರ್ಣ ಬಸವರಾಜು ದತ್ತಿನಿಧಿ
 • ಶ್ರೀಮತಿ ಸುಧಾಮೂರ್ತಿ ದತ್ತಿನಿಧಿ
 • ದಿ.ಕಮಲಾ ರಾಮಸ್ವಾಮಿ ದತ್ತಿನಿಧಿ
 • ಡಾ.ಲೀಲಾವತಿ ದೇವದಾಸ್ ದತ್ತಿನಿಧಿ
 • ಡಾ.ಜಯಮ್ಮ ಕರಿಯಣ್ಣ ದತ್ತಿನಿಧಿ
 • ಶ್ರೀಮತಿ ವಾಣಿರಾವ್ ದತ್ತಿನಿಧಿ
 • ಶ್ರೀಮತಿ (ದಿ) ತ್ರಿವೇಣಿ ದತ್ತಿನಿಧಿ
 • ಶ್ರೀಮತಿ ನೀಳಾದೇವಿ ದತ್ತಿನಿಧಿ
 • ಶ್ರೀಮತಿ ಎಚ್.ಎಸ್.ಪಾರ್ವತಿ ದತ್ತಿನಿಧಿ
 • ಉಮಾದೇವಿ ಶಂಕರರಾವ್ ದತ್ತಿನಿಧಿ.

ಅನುಪಮಾ ಪ್ರಶಸ್ತಿ:

ಸಂಘದಿಂದ ಕೊಡಲಾಗುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದು. ಬರಹಗಾರ್ತಿ, ಸೂಕ್ಷ್ಮ ಸಂವೇದನೆಯ ವೈದ್ಯೆ ಅನುಪಮಾ ಹೆಸರಿನಲ್ಲಿ 1992ರಲ್ಲಿ ಆರಂಭವಾದ ಈ ಪ್ರಶಸ್ತಿ ಮೊತ್ತ ರೂ. 10 ಸಾವಿರ ಹಾಗೂ ಪ್ರಶಸ್ತಿ ಫಲಕ. ವರ್ಷಂಪ್ರತಿ ಓರ್ವ ಕನ್ನಡ ಲೇಖಕಿಯ ಒಟ್ಟು ಸಾಹಿತ್ಯ ಸೇವೆ, ಕನ್ನಡ ಸಾಹಿತ್ಯ ಪರಂಪರೆಗೆ ಆ ಲೇಖಕಿಯ ಕೊಡುಗೆಯೊಂದಿಗೆ ಕಳೆದ 10 ವರ್ಷಗಳಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ `ಉತ್ತಮ ಕೃತಿ'ಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಸೃಜನ ಹಾಗೂ ಸೃಜನೇತರ ಸಾಹಿತ್ಯ ಕೃತಿಗಳನ್ನು ಪರಿಗಣಿಸಲಾಗುತ್ತದೆ. ಭಾಷಾಂತರ, ರೂಪಾಂತರ, ಸಂಪಾದಿತ ಹಾಗೂ ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಪ್ರಬಂಧಗಳನ್ನು ಪರಿಗಣಿಸಲಾಗುವುದಿಲ್ಲ.

ಈವರೆವಿಗೆ ಅನುಪಮಾ ಪ್ರಶಸ್ತಿ ಪಡೆದ ಸಾಧಕಿಯರು

 • 1992 ಎಚ್.ವಿ.ಸಾವಿತ್ರಮ್ಮ
 • 1993 ವೀಣಾ ಶಾಂತೇಶ್ವರ
 • 1994 ವೈದೇಹಿ
 • 1995 ಸಾರಾ ಅಬೂಬಕ್ಕರ್
 • 1996 ಸುನಂದಾ ಬೆಳಗಾಂವ್ಕರ್
 • 1996 ಸುನಂದಾ ಬೆಳಗಾಂವ್ಕರ್
 • 1997 ಶೈಲಜಾ ಉಡುಚಣ
 • 1998 ವಿಜಯಾದಬ್ಬೆ
 • 1999 ಶಾಂತಾದೇವಿ ಮಾಳವಾಡ
 • 2000 ಪ್ರೇಮಾಭಟ್
 • 2001 ಎಚ್.ಎಸ್. ಪಾರ್ವತಿ
 • 2002 ಡಾ.ನಿರುಪಮಾ
 • 2003 ಡಾ. ಕಮಲಾ ಹಂಪನಾ
 • 2004 ಟಿ. ಸುನಂದಮ್ಮ
 • 2005 ಗೀತಾ ನಾಗಭೂಷಣ
 • 2006 ನುಗ್ಗೆಹಳ್ಳಿ ಪಂಕಜ
 • 2007 ಆನಂದಿ ಸದಾಶಿವರಾವ್
 • 2008 ಮಾಲತಿ ಪಟ್ಟಣಶೆಟ್ಟಿ
 • 2009 ನೀಳಾದೇವಿ
 • 2010 ಸರೋಜಾ ನಾರಾಯಣರಾವ್
 • 2011 ಡಾ.ವಿಜಯಾ
 • 2012 ಡಾ. ಬಿ.ಎನ್.ಸುಮಿತ್ರಾಬಾಯಿ
 • 2013 ಪ್ರತಿಭಾ ನಂದಕುಮಾರ್

ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿಯಾಗಿ ಬದಲಾಯ್ತು

1993 ರಲ್ಲಿ ದಿವಂಗತ ಎಚ್.ವಿ ಸಾವಿತ್ರಮ್ಮನವರ ಹೆಸರಿನಲ್ಲಿ ಅವರ ಪತಿ ನೀಡಿರುವ ದತ್ತಿನಿಧಿಯಿಂದ ಸ್ಥಾಪಿತವಾದ ಈ ಬಹುಮಾನ ಕನ್ನಡ ಲೇಖಕಿಯ ಉತ್ತಮ ಸೃಜನಶೀಲ ಅನುವಾದಿತ ಕೃತಿ/ ಸಣ್ಣ ಕಥೆಗಳ ಸಂಕಲನಕ್ಕೆ ನೀಡಲಾಗುತ್ತದೆ. ಅನುವಾದ ಸಾಹಿತ್ಯಕ್ಕೆ ಒಂದು ವರ್ಷ ಹಾಗೂ ಸಣ್ಣ ಕಥೆಗಳ ಸಂಕಲನಕ್ಕೆ ಇನ್ನೊಂದು ವರ್ಷ...ಹೀಗೆ ಬಹುಮನ ಕೊಡಮಾಡಲಾಗುತ್ತದೆ. ಇತ್ತೀಚಿಗೆ `ಸಾವಿತ್ರಮ್ಮ ದತ್ತಿನಿಧಿ'ಯಲ್ಲಿ ಆದ ಬದಲಾವಣೆಯೆಂದರೆ, ಪ್ರಶಸ್ತಿಯ ಮೊತ್ತ, ಈ ವರೆಗೂ ಇದ್ದ 7,000ಕ್ಕೆ ಬದಲಾಗಿ 25,000ಕ್ಕೆ ಹೆಚ್ಚಿರುವದು. ಸಾವಿತ್ರಮ್ಮನವರ ಪುತ್ರ ವಿ. ರಾಮಸ್ವಾಮಿಯವರು 5 ಲಕ್ಷ ದೇಣಿಗೆ ನೀಡಿ ಅವರ ತಾಯಿಯ ಹೆಸರಿನಲ್ಲಿ ಲೇಖಕಿಯೊಬ್ಬರಿಗೆ ಪ್ರತೀವರ್ಷ 25,000 ರೂ. ನಗದು, ಸ್ಮರಣ ಫಲಕವನ್ನು ನೀಡಬೇಕೆಂದು ತಿಳಿಸಿರುತ್ತಾರೆ. ಈ ಸಂಬಂಧ ಉಮಾರಾವ್ ಅವರಿಗೆ ಪ್ರಪ್ರಥಮವಾಗಿ ಈ ಪ್ರಶಸ್ತಿ ದೊರಕಿದೆ.

ಈವರೆವಿಗೆ ಎಚ್. ವಿ ಸಾವಿತ್ರಮ್ಮ ದತ್ತಿನಿಧಿ ಪಡೆದ ಲೇಖಕಿಯರು.

 • 1993 ಸುಶೀಲಾ ಕೊಪ್ಪರ್
 • 1994 ಎಂ.ಎಸ್.ವೇದ
 • 1995 ಉಮಾದೇವಿ
 • 1996 ಭಾಗೀರಥಿ ಹೆಗಡೆ
 • 1997 ಕೆ.ಎನ್. ವಿಜಯಲಕ್ಷ್ಮೀ
 • 1998 ಮಿತ್ರಾ ವೆಂಕಟರಾಜ್
 • 1999 ಸಾರಾ ಅಬೂಬಕರ್
 • 2000 ಬಾನು ಮುಷ್ತಾಕ್
 • 2001 ಕುಲಶೇಖರಿ ಹಾಗೂ ಪಾರ್ವತಿ ಜಿ.ಐತಾಳ್
 • 2002 ಜಯಶ್ರೀ ಕಾಸರವಳ್ಳಿ
 • 2003 ಭಾರತಿ ಮೋಹನ ಕೋಟಿ ಮತ್ತು ಶುಭದಾ ಅಮೀನಭಾವಿ
 • 2004 ಅನುಜಯಾ ಎಸ್.ಕುಮಟಾಕರ್
 • 2005 ಶ್ಯಾಮಲಾ ಮಾಧವ
 • 2006 ಸುನಂದಾ ಪ್ರಕಾಶ ಕಡಮೆ ಮತ್ತು ಕಸ್ತೂರಿ ಬಾಯಿರಿ
 • 2007 ಡಾ. ಎಲ್.ಸಿ. ಸುಮಿತ್ರಾ
 • 2008 ಬಿ.ಟಿ.ಜಾಹ್ನವಿ
 • 2009 ಡಾ. ತಮಿಳ್ಸೆಲ್ವಿ
 • 2010 ಗಂಗಾ ಪಾದೇಕಲ್
 • 2011 ಲೀಲಾ ನಾಯಕ್
 • 2012 ಡಾ.ವಿಜಯಾ ಸುಬ್ಬರಾಜ್
 • ಎಚ್,ವಿ,ಸಾವಿತ್ರಮ್ಮ ಪ್ರಶಸ್ತಿ ಪಡೆದ ಲೇಖಕಿಯರು

 • 2013 ಉಮಾ ರಾವ್

 

ಗೀತಾ ದೇಸಾಯಿ ದತ್ತಿನಿಧಿ ಬಹುಮಾನ

1987 ರಲ್ಲಿ ದಿ. ಗೀತಾ ದೇಸಾಯಿ ಹೆಸರಿನಲ್ಲಿ ಅವರ ಪತಿ ಸ್ಥಾಪಿಸಿದ ಈ ದತ್ತಿನಿಧಿ ಬಹುಮಾನ ಪ್ರತಿವರ್ಷ ಕ್ರಮವಾಗಿ ಕಾದಂಬರಿ, ಕವನಸಂಕಲನ, ವಿಚಾರ ಸಾಹಿತ್ಯ...ಈ ಪ್ರಕಾರದಲ್ಲಿ ಪ್ರಕಟವಾದ ಉತ್ತಮ ಕೃತಿಯೊಂದಕ್ಕೆ ಸರದಿಯಂತೆ ನೀಡಲಾಗುತ್ತದೆ. ಮೂರು ವರ್ಷಕ್ಕೊಮ್ಮೆ ಒಂದೊಂದು ಪ್ರಕಾರದ ಕೃತಿಗೆ ಬಹುಮಾನ ನೀಡುವುದರಿಂದ ಹಿಂದಿನ ಮೂರು ವರ್ಷಗಳ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುತ್ತದೆ.

ಗೀತಾ ದೇಸಾಯಿ ದತ್ತಿನಿಧಿ ಬಹುಮಾನ ಪಡೆದ ಕೃತಿಕಾರರು:

 • 1987 ವೈದೇಹಿ
 • 1988 ಎಂ.ಎಸ್. ವೇದಾ
 • 1989 ವಿಜಯಾ
 • 1990 ಕೆ.ಎಂ. ವಿಜಯಲಕ್ಷ್ಮಿ
 • 1991 ವೈದೇಹಿ
 • 1992 ವಿಜಯಾ ದಬ್ಬೆ
 • 1993 ರೇಖಾ ಕಾಖಂಡಕಿ
 • 1994 ರಜಿಯಾ ಡಿ.ಬಿ
 • 1995 ಡಾ. ಬಿ.ಎನ್ ಸುಮಿತ್ರಾ ಬಾಯಿ
 • 1996 ರೇಖಾ ಕಾಖಂಡಕಿ
 • 1997 ಸವಿತಾ ನಾಗಭೂಷಣ
 • 1998 ಧರಣೀದೇವಿ ಮಾಲಗತ್ತಿ
 • 1999 ಎಚ್.ನಾಗವೇಣಿ
 • 2000 ಮಾಲತಿ ಪಟ್ಟಣಶೆಟ್ಟಿ
 • 2001 ಬಾ.ಹ.ರಮಾಕುಮಾರಿ
 • 2002 ಡಾ. ಎಸ್.ವಿ. ಪ್ರಭಾವತಿ
 • 2003 ಟಿ.ಸಿ.ಪೂರ್ಣಿಮಾ
 • 2004 ಡಾ.ಗುರುದೇವಿ ಹುಲ್ಲಪ್ಪನವರ ಮಠ
 • 2005 ತಾರಾಭಟ್
 • 2006 ಡಾ. ವಿನಯಾ
 • 2007 ವೀಣಾ ಬನ್ನಂಜೆ
 • 2008 ವಸುಮತಿ ಉಡುಪ
 • 2009 ಜ್ಯೋತಿ ಗುರುಪ್ರಸಾದ್
 • 2010 ಡಾ.ರತ್ನಶೀಲಾ ಗುರಡ್ಡಿ
 • 2011 ಎಂ.ಸರಸ್ವತಿಗೌಡ
 • 2012 ಎಲ್.ವಿ.ಶಾಂತಕುಮಾರಿ

ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ

ಹಿರಿಯ ಕವಯಿತ್ರಿ ಗುಡಿಬಂಡೆ ಪೂರ್ಣಿಮಾ ಅವರಿಂದ ಪ್ರಾಯೋಜಿಸಲ್ಪಡುವ ಈ ದತ್ತಿನಿಧಿ ಬಹುಮಾನ ಉದಯೋನ್ಮುಖ ಕವಯತ್ರಿಯರಿಗೆ ಸೀಮಿತ. ನಿಯತಕಾಲಿಕೆಗಳು, ಪತ್ರಿಕೆಗಳಲ್ಲಿ ಮೂಡಿಬರುವ ಭರವಸೆಯ ಕವನಗಳ ಆಧಾರದ ಮೇಲೆ ಈ ಬಹುಮಾನಕ್ಕೆ ಅರ್ಹರನ್ನು ಆಯ್ಕೆಮಾಡಲಾಗುವುದು.

ಪ್ರೇಮಾಭಟ್ ದತ್ತಿನಿಧಿ ಬಹುಮಾನ

2000ನೇ ಇಸವಿಯಲ್ಲಿ ಅನುಪಮಾ ಪ್ರಶಸ್ತಿ ಪಡೆದ ಪ್ರೇಮಾಭಟ್, ಆ ಪ್ರಶಸ್ತಿ ಮೊತ್ತದಿಂದ ಐದು ಸಾವಿರ ರೂಪಾಯಿಗಳನ್ನು ಸಂಘಕ್ಕೆ ನೀಡುವುದರ ಮೂಲಕ ತಮ್ಮ ಹೆಸರಿನ ದತ್ತಿನಿಧಿ ಪ್ರಶಸ್ತಿಗೆ ನಾಂದಿ ಹಾಡಿದರು. ಈ ಮೊತ್ತದ ಬಡ್ಡಿಯಲ್ಲಿ ಗ್ರಾಮಾಂತರ/ಗ್ರಾಮೀಣ ಪ್ರದೇಶದ ಉದಯೋನ್ಮುಖ ಕತೆಗಾರ್ತಿಯ ಅಪ್ರಕಟಿತ ಕತೆಗೆ ಬಹುಮಾನ ನೀಡಲು ಪ್ರೇಮಾಭಟ್ ಸಂಘಕ್ಕೆ ಮನವಿ ಮಾಡಿದ್ದು. ಅದರಂತೆ ಪ್ರತಿವರ್ಷವೂ ನಡೆಸಿಕೊಂಡು ಬರಲಾಗುತ್ತಿದೆ.